The Penile Purana of a Cripple | ವಿಕಲಾಂಗ ಪುರುಷನ ಶಿಶ್ನ ಪುರಾಣ

By and | 1 October 2016

ಬಿರುಬಿಸಿಲಲ್ಲಿ ವಸಂತ ಬಂದ
ಹೂವು ಅರಳಲೇ ಇಲ್ಲ
ಜೋತಾಡಿದವು ಹೆಣ ಮಾವಿನ ಮರದಲಿ
ಕೋಗಿಲೆಗೆ ಕಂಠವೇ ಇಲ್ಲ ವಸಂತನಿಗೆ ಮುಖವೇ ಇಲ್ಲ
ಅನಂಗನ ಸಂಗದಲಿ
ಮಧುರ ಮಿಲನವೊಂದು ಸಾದ್ಯವೇ ?

ಸುಳ್ಳು ಸೃಷ್ಟಿ ಪೊಳ್ಳು ಪುರಾಣಗಳ ಪಹರೆಯಲಿ
ಮೈಯೆಂಬ ಮೈಎಲ್ಲ ಯೋನಿಯಾಗಿ
ಯೋನಿಯೀ ಕಣ್ಣಾಗಿ ಕಲ್ಲಾಗಿ ಶಾಪಗ್ರಸ್ಥ ಶಿಸ್ನ ಚರಿತೆಗೆ
ಮುಳ್ಳುಗಳ ಸಾಲು

ಎಲ್ಲಿ ನೋಡಿದಲ್ಲಿ ಮುಖವಿಲ್ಲದ ಮನುಷ್ಯರು
ವಿಕಲಾಂಗ ಪುರುಷರ ಶಿಶ್ನಗಳು ಚೀರುತ್ತಿವೆ
“ನಿಮ್ಮ ಅಂಗಗಳ ನಮ್ಮ ಪ್ರಚೋದಿಸುತ್ತಿವೆ”
ಪಾಪ! ಗೊತ್ತಿಲ್ಲ ಅವರಿಗೆ, ಕ್ಷಮೆ ಇರಲಿ ಶಿವನೆ!!
ಅನಂಗರ ಶಿಶ್ನಗಳು ಅಸಹ್ಯ ಹುಟ್ಟಿಸುತ್ತಿವೆ
‘ಲಿಂಗವನು ಭಂಗ ಮಾಡುವ’ ಹತಾರುಗಳ ಮಸೆಯುತ್ತಿವೆ
ಅಯ್ಯೋ, ಅನಾರೋಗ್ಯಕರ ಪರಿಸರವೊಂದು ಹುಟ್ಟದಿರಲಿ

ಹಣ್ಣು-ಹೆಣ್ಣುಗಳ ಮನುಷ್ಯತ್ವದ ಮೀಮಾಂಸೆ
ಅರಿಯದ ಚರಿತೆಗೆ ಅನಾಗರಿಕ ಸೋಂಕು
ಮನಸ್ಸಿನ ಮಾತು ಮನಸು¼Àîವರ ಅಂತರಾಳ
ಮನಸು ಒಲಿಸಿಕೊಳುವುದು ಕಲಾಚಾರ
ಹೆಣ್ಣಿನ ಮನಸ ಒಲಿಸಿಕೊಳಲಾರದ
ಗಂಡಿನ ದೌರ್ಬಲ್ಯದ ಅಭಿವ್ಯಕ್ತಿಯೇ ಅತ್ಯಾಚಾರ
ಛೆ! ಕವಿತೆ ವಾಚ್ಯವಾಯಿತೇ?
ಅತ್ಯಾಚಾರಕ್ಕೆ ಇನೆಂಥ ಧ್ವನಿ ಹೊರಡುತ್ತೆ?
ಅದು ಮಾಧುರ್ಯದಿಂದ ಹೊರತಾದುದು

ಅಂದು—
ಧನ ಕನಕ ಕೊಟ್ಟರೆ ಹೆಂrರೋಲಿವರೆ?
ಪ್ರಶ್ನಿಸಿದ್ದಳು ದ್ರೌಪದಿ
ಇಂದು—
ಮಣಿಪುರದ ಮಹಿಳೆಯರ ಬಹಿರಂಗ ಆಹ್ವಾನಕ್ಕೆ
ದಕ್ಕಿಲ್ಲ ಇನ್ನೂ ಉತ್ತರ!
ಶಿ±Àßಕ್ಕೆ ಕಣ್ಣಿಲ್ಲ, ಮನಸಿಲ್ಲ ಅದು ಪೂರ್ಣ ದೇಹವಲ್ಲ
ದೇಹವಿಲ್ಲದವರು ಮುಖಾಮುಖಿಯಾಗುವುದಿಲ್ಲ

ಏಕಾಂತದ ಮಿಲನೋತ್ಸವದಲಿ
ಬಿತ್ತುವ ಗರ್ವ ರಸದ ಭಯದಲಿ
ತಂqÀÄಗಟ್ಟಿ ಎರಗುತ್ತಾರೆ
ಮನಸಿಲ್ಲದ ಮಿಲನಕ್ಕೆ ಯಾವ ಅರ್ಥವುಂಟು?
ನೂರು ನೂರು ಕಣ್ಣುಗಳಲಿ ಬಣ್ಣ ಬಣ್ಣಗಳ ತುಂಬಿ
ಗರಿ ಬಿಚ್ಚಿ ಕುಣಿವ ನವಿಲಿನ ಗುಟ್ಟು
ಈ ನೆಲದ ಹಾಡಾಗಬೇಕು–

This entry was posted in 76: DALIT INDIGENOUS and tagged , . Bookmark the permalink.

Related work:

  • No Related Posts Found

Comments are closed.